Visitors

 Read and Win Contest
 ON STANDS
 News
ಪ್ರಜೆಗಳೇ ಪ್ರಭುವಾಗುವ 'ಪ್ರಭುತ್ವ
read more
ರಾಜಗಂಭೀರದಿಂದ ಬಂದ ರಾಜಸಿಂಹ ಹಾಡುಗಳು
read more
 Features

ಯಶ್ ಹುಟ್ಟುಹಬ್ಬಕ್ಕೆ ಉಡುಗೊರೆ
ಸಂತು ಸ್ಟ್ರೇಟ್ ಫಾರ್ವಡ್ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ, ಈ ವರ್ಷ ಯಶ್ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಇದರಿಂದ ಬೇಸರಗೊಂಡಿದ್ದ ಅಭಿಮನಿಗಳಿಗೆ ಖುಷಿಯ ವಿಚಾರವೊಂದಿದೆ. ಈ ಸದ್ಯ ಯಶ್ ಕೆಜಿಎಫ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆಕಾಣಲಿದೆ ಎಂದು ಹೇಳುವ ಜೊತೆಗೆ ಈ ವರೆಗೂ ಎರಡೇ ಎರಡು ಪೋಸ್ಟರ್ಗಳನ್ನು ಬಿಡುಗಡೆ ಮಾಡಿತ್ತು ಚಿತ್ರತಂಡ. ಇದನ್ನುಳಿದಂತೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದೇ ಎಲ್ಲವನ್ನೂ ಗೌಪ್ಯವಾಗಿಟ್ಟಿತ್ತು. ಈಗ ಯಶ್ ಹುಟುಹಬ್ಬಕ್ಕೆ ಒಂದು ಭರ್ಜರಿ ಉಡುಗೊರೆಯನ್ನು ನೀಡಲು ಕೆ.ಜಿ.ಎಫ್ ನಿರ್ಧರಿಸಿದೆ. ಜನವರಿ 8ಕ್ಕೆ ಯಶ್ ಹುಟ್ಟುಹಬ್ಬ ಇದ್ದು ಅಂದು ಕೆಜಿಎಫ್ನ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿದೆ. ಯಶ್ರನ್ನು ತೆರೆಯ ಮೇಲೆ ನೋಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಅಭಿಮಾನಿಗಳಿಗೆ ಇದರಿಂದ ಸಣ್ಣ ಸಮಾಧಾನ ಸಿಕ್ಕರೂ ಸಿಗಬಹುದು.

Twitter star

ಟ್ವಿಟರ್ನಲ್ಲಿ ಹೆಚ್ಚು ಸ್ಟಾರ್ ಪತ್ನಿ
ಇತ್ತ ಬಿಗ್ಬಾಸ್ ಅತ್ತ ಹಾಲಿವುಡ್ 'ರೈಸನ್' ನಡುವಿನಲ್ಲಿ 'ಬಾಕ್ಸರ್' ಶೂಟಿಂಗ್ ಹೀಗೆ ಎಲ್ಲಾ ಕಡೆ ಬ್ಯುಸಿ ಇದ್ದಾಗ ಕೂಡಾ ತಮ್ಮ ಅಭಿಮಾನಿಗಳನ್ನು ಟ್ವಿಟರ್ ಮೂಲಕ ತಲುಪುತ್ತಿದ್ದಾರೆ. ಪಾಕಿಸ್ತಾನದಲ್ಲಿಯೂ ಫಾಲೋವರ್ಸ್ ಹೊಂದಿರುವ ಸುದೀಪ್ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕನ್ನಡದ ನಟ ಎಂಬ ಖ್ಯಾತಿಗೂ ಕಾರಣರಾಗಿದ್ದಾರೆ. ಇದರ ನಡುವೆ ಪತಿಯಂತೆ ತಾವೂ ಟ್ವಿಟರ್ನಲ್ಲಿ ಸಕ್ರಿಯವಾಗಿರುವ ಸುದೀಪ್ ಪತ್ನಿ ಪ್ರಿಯಾ ಫಾಲೋವರ್ಸ್ ಸಂಖ್ಯೆ 50 ಸಾವಿರದ ಗಡಿ ದಾಟಿದ್ದು ಈ ಮೂಲಕ ಸ್ಯಾಂಡಲ್ವುಡ್ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಸ್ಟಾರ್ ಪತ್ನಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಪ್ರಿಯಾ ತಮ್ಮ ಟ್ವಿಟರ್ನಲ್ಲಿ ಕಿಚ್ಚನ ಬಗ್ಗೆ ಮಾತ್ರವಲ್ಲದೇ ಅವನ ನೆಚ್ಚಿನ ಸಿನಿಮಾ, ಕ್ರೀಡೆ, ಸೇರಿದಂತೆ ನಾನಾ ಕ್ಷೇತ್ರಗಳ ಬಗ್ಗೆ ಅಪ್ಡೇಟ್ ಮಾಡುತ್ತಿರುತ್ತಾರೆ. ಇವರದೇ ಒಡೆತನದ ಸ್ಟೇಜ್ 360 ಇವೆಂಟ್ ಕಂಪೆನಿಯ ಬಗ್ಗೆ ಕೂಡಾ ಇಲ್ಲಿ ಅಪ್ಡೇಟ್ ಮಾಡುತ್ತಿರುತ್ತಾರೆ.


 Trending star Upendra

ಪ್ರಜ್ಞಾವಂತರಿಗಾಗಿ ವೆಬ್ಸೈಟ್
ಬದಲಾವಣೆಯ ಕನಸು ಹೊತ್ತು ಸಿನಿಮಾರಂಗಕ್ಕೆ ಸಣ್ಣ ಗ್ಯಾಪ್ ಕೊಟ್ಟು ರಾಜಕೀಯ ಪ್ರವೇಶ ಮಾಡಿರುವ ರಿಯಲ್ ಸ್ಟಾರ್ ಉಪೇಂದ್ರ 'ಕನರ್ಾಟಕ ಪ್ರಜ್ಞಾವಂತ ಜನತಾ ಪಕ್ಷ' (ಕೆಪಿಜೆಪಿ) ಸ್ಥಾಪಿಸಿರುವ ವಿಷಯ ನಿಮಗೆಲ್ಲರಿಗೂ ತಿಳಿದಿದೆ. ಈ ಬಗೆಗಿನ ಹೊಸ ಅಪ್ಡೇಟ್ ಏನೆಂದರೆ ಉಪೇಂದ್ರ ಅವರ ಕೆಪಿಜೆಪಿ ಪಕ್ಷದ ವೆಬ್ಸೈಟ್ ಬಿಡುಗಡೆಯಾಗಿದೆ. ಇದರಲ್ಲಿ ಪಕ್ಷದ ಗುರಿ, ಪಕ್ಷದ ಚಟುವಟಿಕೆಗಳು ಹೇಗಿರಬೇಕು, ಜನರನ್ನ ತಲುಪುವುದು ಹೇಗೆ ಎಂಬಿತ್ಯಾದಿ ವಿವರಗಳಿವೆ. ಇನ್ನು ಚುನಾವಣೆಯಲ್ಲಿ ಸ್ಪಧರ್ಿಸಲು ಬೇಕಾಗಿರುವ ಮಾನದಂಡಗಳೂ ಸೇರಿ ಸಾಕಷ್ಟು ವಿಷಯಗಳು ಇಲ್ಲಿ ಲಭ್ಯವಾಗಲಿದೆ. ಇದರ ಜೊತೆಗೆ ಚುನಾವಣೆಯಲ್ಲಿ ಸ್ಪಧರ್ಿಸಲು ಬಯಸುವವರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿ ತಿಳಿಸಲು ಸೂಚಿಸಿದ್ದಾರೆ. ಪಕ್ಷದ ಆಲೋಚನೆಯಷ್ಟೇ ವೆಬ್ಸೈಟ್ ಕೂಡಾ ತುಂಬಾ ಕ್ರಿಯಾಶೀಲತೆಯಿಂದಲೇ ಕೂಡಿದೆ.


  Cloth market

ನಟಿಯರ ಬಟ್ಟೆಗಳು ಹರಾಜಿಗೆ
ಸಿನಿಮಾ ನಟಿಯರು ಎಂದರೆ ಬರೀ ಗ್ಲಾಮರ್ ಗೊಂಬೆಗಳು ಎಂದು ಮೂಗುಮುರಿಯುವ ಕಾಲ ಮುಗಿದು ಹೋಗಿದೆ. ಒಬ್ಬರಿಗಿಂತ ಒಬ್ಬರು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಎಲ್ಲರೂ ಮಾಡುವಂತೆ ಇವರೂ ಸಿನಿಮಾ ಮಾಡುತ್ತಿದ್ದಾರೆ ಎಂದು ಸುಮ್ಮನಾಗುವ ಹೊತ್ತಿಗೆ ಎಲ್ಲರೂ ಗಮನಿಸಲೇ ಬೇಕಾದಂತ ವಿಷಯವನ್ನು ಸ್ಯಾಂಡಲ್ವುಡ್ ನಟಿಯರು ಸೇರಿ ಮಾಡಿದ್ದಾರೆ. ಒಂದು ಸಿನಿಮಾದಲ್ಲಿ ಒಬ್ಬ ನಟಿ ನೂರು ಬಟ್ಟೆಗಳನ್ನು ಹಾಕಿರುತ್ತಾರೆ. ತೊಟ್ಟ ಅಸ್ತ್ರವನ್ನು ಮತ್ತೆ ತೊಡುವುದಿಲ್ಲ ಎನ್ನುವ ಶಪತದಂತೆ ಒಮ್ಮೆ ಬಳಸಿದ ಬಟ್ಟೆಯನ್ನು ಮತ್ತೆ ಬಳಸುವುದಿಲ್ಲ. ಬಳಸಿದರೆ ಅದು ಚೆನ್ನಾಗಿಯೂ ಇರುವುದಿಲ್ಲ. ಹಾಗಾದರೆ ಈ ಬಟ್ಟೆಗಳನ್ನು ಏನು ಮಾಡುವುದು?. ಇಂಥದೊಂದು ಪ್ರಶ್ನೆ ಸ್ಯಾಂಡಲ್ವುಡ್ನ ನಟಿಯರಿಗೆ ಬಂದಿದ್ದೇ ತಮ್ಮ ಬಟ್ಟೆ, ಮತ್ತು ಜ್ಯುವೆಲರಿಗಳನ್ನು ಹರಾಜು ಹಾಕಿದ್ದಾರೆ. ಹಾರಾಜು ಎಂದ ತಕ್ಷಣ ಈ ಮೂಲಕವೂ ಒಂದಿಷ್ಟು ದುಡ್ಡು ಮಾಡುವುದು ಇವರ ಯೋಚನೆ ಅಲ್ಲ. ಬದಲಿಗೆ ಇಲ್ಲಿ ಬಂದ ದುಡ್ಡನ್ನು ಜೆ.ಪಿ.ಫೌಂಡೇಶನ್ ಮತ್ತು ಆದ್ಯ ಫೌಂಡೇಶನ್ ಎಂಬ ಎರಡು ಎನ್.ಜಿ.ಓಗಳಿಗೆ ನೀಡಿದ್ದಾರೆ. ಇಂಥದೊಂದು ಆಲೋಚನೆಯಲ್ಲಿ ಸ್ಯಾಂಡಲ್ವುಡ್ನ ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಸಂಯುಕ್ತಾ ಹೆಗ್ಡೆ, ಸಂಯುಕ್ತಾ ಹೊರನಾಡು, ಸೋನುಗೌಡ, ಮಾನ್ವಿತಾ ಹರೀಶ್, ಕಾವ್ಯಾ ಶೆಟ್ಟಿ, ಶಾನ್ವಿ ಶ್ರೀವಾಸ್ತವ, ಸಂಗೀತ ಭಟ್ ಸೇರಿದಂತೆ ಇನ್ನು ಹಲವರು ಇದರ ಹಿಂದಿದ್ದಾರೆ.

 Rebal star Ambi

ಅಂಬಿಗೆ ಶ್ಯಾನೆ ವಯಸ್ಸಾಯ್ತು
ನಿಮ್ಮ ಎದುರಿಗೆ ಯಾರಾದರೂ ಬಂದು 'ನಿಮಗೆ ತುಂಬಾ ವಯಸಾಯ್ತು' ಎಂದರೆ ನೀವು ಖಂಡಿತ ಸಿಟ್ಟಾಗುತ್ತೀರಾ. ಅಂಬರೀಶ್ ಎದುರಿಗೆ ನಿಂತು ಇದೇ ಡೈಲಾಗ್ ಹೇಳಿದರೆ ಅವರು ಖಂಡಿತ ಸಿಟ್ಟಾಗುವುದಿಲ್ಲ. ಬದಲಿಗೆ ನಕ್ಕು ಸ್ವಲ್ಪ ತಾಳಿ ಇನ್ನೇನು ಶೂಟಿಂಗ್ ಶುರು ಆಗುತ್ತೆ ಅಂತಾರೆ. ವಯಸ್ಸಿಗೂ ಶೂಟಿಂಗ್ಗೂ ಏನ್ ಸಂಬಂಧ ಎಂದು ತಲೆ ಕೆಡುತ್ತಿದೆಯಾ?. ಸ್ಯಾಂಡಲ್ವುಡ್ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಅಂಬಿ ನಿಂಗೆ ವಯಸ್ಸಾಯ್ತೋ' ಹೆಸರಿನ ಸಿನಿಮಾ ಸೆಟ್ಟೇರುತ್ತಿದೆ. ರೆಬಲ್ಸ್ಟಾರ್ಗೆ ಸುಹಾಸಿನಿ ಜೋಡಿಯಾಗುತ್ತಿದ್ದು, ಸುದೀಪ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಕಿಚ್ಚ ಕ್ರಿಯೇಶನ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಜಾಕ್ ಮಂಜು ಹಣ ಹೂಡುತ್ತಿದ್ದಾರೆ. ಅಜರ್ುನ್ ಜನ್ಯ ಸಂಗೀತ, ಕಿರಣ್ ಸಂಕಲನವಿದ್ದರೆ, ತಮಿಳಿನ ಪವರ್ ಪಾಂಡಿಯನ್ನ ರಿಮೇಕ್ ಎಂದು ಹೇಳಲಾಗುತ್ತಿರುವ ಈ ಚಿತ್ರಕ್ಕೆ ಸುದೀಪ್ ಜೊತೆಯಲ್ಲಿ ಸಹಾಯಕನಾಗಿ ಕೆಲಸ ಮಾಡಿದ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Shivanna in happy mood

ಸದ್ದು ಮಾಡಿದ ಶಿವಣ್ಣ
ನವೆಂಬರ್ನಲ್ಲಿ ಸಾಕಷ್ಟು ಸದ್ದು ಮಾಡಿದ ಸ್ಟಾರ್ ಎಂದರೆ ಅದು ಶಿವಣ್ಣ. ಸದ್ದು ಎಂದಿದಕ್ಕೆ ಬಿಡುಗಡೆಯಾದ ಸಿನಿಮಾ ಯಾವುದು ಎಂದು ಕೇಳಬೇಡಿ. ಶಿವಣ್ಣ ಮತ್ತು ಶ್ರೀ ಮುರಳಿ ಅಭಿನಯದ ಮಫ್ತಿ ಸಿನಿಮಾ ಇದೇ ಡಿಸೆಂಬರ್ 1ರಂದು ಬಿಡುಗಡೆಯಾಗುತ್ತಿದೆ. ನಾವಿಲ್ಲಿ ಹೇಳುತ್ತಿರುವ ಸದ್ದಿನ ಸುದ್ದಿ ಎಂದರೆ ಶಿವಣ್ಣ ಅಭಿನಯದ ಸಿನಿಮಾದ ಟ್ರೇಲರ್ಗಳು. ನರ್ತನ್ ನಿದರ್ೇಶನಲ್ಲಿ ಶ್ರೀಮುರುಳಿ ಮತ್ತು ಶಿವಣ್ಣ ಒಟ್ಟಾಗಿರುವ 'ಮಫ್ತಿ' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದೇ ತಡ ಇಡೀ ಸ್ಯಾಂಡಲ್ವುಡ್ ನಿಬ್ಬೆರಗಾಗಿ ನೋಡುತ್ತಿದೆ. ಇಬ್ಬರು ಸ್ಟಾರ್ಗಳು ಒಟ್ಟಾಗುತ್ತಿದ್ದಾರೆ ಎಂದಾಗಲೇ ಕುತೂಹಲ ಇಮ್ಮಡಿಯಾಗಿತ್ತು, ಟ್ರೇಲರ್ ನೋಡಿದ ಮೇಲೆ ಅದು ಪುನಃ ನೂರುಪಟ್ಟು ಹೆಚ್ಚಾಗಿದೆ. ಇತ್ತ ಸೂರಿ ನಿದರ್ೇಶನದಲ್ಲಿ ಮೂಡಿಬರುತ್ತಿರುವ 'ಟಗರು' ಚಿತ್ರದ ಟ್ರೇಲರ್ ಕೂಡಾ ಇದೇ ತಿಂಗಳು ಅದ್ದೂರಿ ಕಾರ್ಯಕ್ರಮದಲ್ಲಿ ಬಿಡುಗಡೆಯಾಯ್ತು. ಹಿನ್ನಲೆ ಸಂಗೀತ, ಕ್ಯಾಮರಾ ವಕರ್್ ಸೇರಿ ಎಲ್ಲದರಲ್ಲಿಯೂ ದಿ ಬೆಸ್ಟ್ ಕೊಟ್ಟಿರುವ ಸೂರಿ ಈ ಸಿನಿಮಾಗಾಗಿ ತುದಿಗಾಲಿನಲ್ಲಿ ನಿಂತು ಕಾಯುವಂತೆ ಮಾಡಿದ್ದಾರೆ.

       
Infotainment
InfoMedia
We
contact us
© 2010 Chittara. All Rights Reserved