Visitors

 Read and Win Contest
 ON STANDS
 Features
ಸೆಟ್ಟೇರಿದ ತ್ರಿಕೋನ ಪ್ರೇಮಕಥೆಯ `ಓ..’
read more
ರಿಲೀಸ್ಗೆದ ರೆಡಿಯಾಗಿದೆ 18 ರಿಂದ 25
ಮೂರು ರೀತಿಯ ಲವ್ ಕಹಾನಿಗಳನ್ನೊಳಗೊಂಡಿರುವ ಚಿತ್ರ `18 ರಿಂದ 25’ ಇದು ಕಲರ್ಫು ಲ್ ಯೂತ್ ಮೂವಿ. ಆ ವಯಸ್ಸಿನ ಹುಡುಗ-ಹುಡುಗಿಯರು
read more
ಅಸುರ ಸಂಹಾರ
ಕಳೆದ ಐದು ವರ್ಷಗಳ ಹಿಂದೆ ಬೆಂಗಳೂರಿನ ವಿಬ್ಗಿಯಾರ್ ಶಾಲೆಯಲ್ಲಿ ನಡೆದ ಚಿಕ್ಕ ಮಗುವಿನ ಮೇಲಿನ ಅತ್ಯಾಚಾರದ ಘಟನೆಯನ್ನಿಟ್ಟುಕೊಂಡು..
read more
 News

ವೈಕಲ್ಯ ದೇಹಕ್ಕೆ ಮನಸ್ಸಿಗಲ್ಲ ಎನ್ನುತ್ತಿದ್ದಾರೆ
ಎಂಡೋಸಲ್ಫಾನ್ ಪೀಡಿತರ ಬದುಕು ಹೇಗಿರುತ್ತದೆ ಎನ್ನುವುದು ಅನುಭವಿಸಿದವರಿಗೇ ಗೊತ್ತು. ಈಗ ಅದನ್ನು ತೆರೆಯ ಮೇಲೆ ತೋರಿಸಲು ಸಜ್ಜಾಗಿದ್ದಾರೆ ನಿರ್ದೇಶಕ ರಾಜಾ ರವಿವರ್ಮ. ರಾಜ್ ಪ್ರಿಯಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರವನ್ನು ಹೆಚ್. ಸೋಮಶೇಖರ್ ಹಾಗೂ ರಾಮು ಅವರು ನಿರ್ಮಾಣ ಮಾಡಿದ್ದಾರೆ. ಮಾ. ಝುಯ್ಯದ್, ಮಾ. ವಿನಯ್, ಮಾ. ಕಿರಣ್, ಮುನಿ, ಮೂಗ್ ಸುರೇಶ್, ನೀನಾಸಂ ಅಶ್ವತ್ಥ್, ಮನದೀಪ್ ರಾಯ್, ಮಂಜು ಸೂರ್ಯ ಮೊದಲಾವರು ಅಭಿನಯದ ಚಿತ್ರಕ್ಕೆ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ರಚಿಸಿದ್ದಾರೆ. ಬಡ ಕುಟುಂಬದ ವಿಕಲಚೇತನ ಮಕ್ಕಳ ಬವಣೆಯ ಜೊತೆಯಲ್ಲಿ ಅವರಿಗಿರುವ ಶಕ್ತಿ, ಸಾಮಥ್ರ್ಯವನ್ನು ಗುರುತಿಸುವ ಕೆಲಸವನ್ನು ನಿರ್ದೇಶಕರು ಮನೋಜ್ಞವಾಗಿ ಮಾಡಿದ್ದಾರೆ.


  'Ranaheedi'
ಗ್ರಾಮ್ಯ ಸೊಗಡಿನ `ರಣಹೇಡಿ’
ಕಬ್ಬು ಬೆಳೆಗಾರರ ಸಮಸ್ಯೆಯ ಜೊತೆಯಲ್ಲಿ ರೈತರ ಬದುಕು ಹೇಗಿರುತ್ತದೆ ಎಂಬುದನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನವೇ `ರಣಹೇಡಿ’. ಪಕ್ಕಾ ಗ್ರಾಮ್ಯ ಬದುಕಿನ ಅನಾವರಣ ಈ ಚಿತ್ರದಲ್ಲಿದೆ ಎನ್ನುತ್ತಿದೆ ಚಿತ್ರತಂಡ. ವಿಭಿನ್ನ ಟೈಟಲ್ ಇಟ್ಟುಕೊಂಡು, ಸಂಪೂರ್ಣ ಹೊಸಬರೇ ಸೇರಿಕೊಂಡು ತಯಾರಿಸಿದ ಚಿತ್ರ ಇದಾಗಿದೆ. ಮಂಡ್ಯಕ್ಕೆ ಕಬ್ಬು ಕಡಿಯಲು ಬಳ್ಳಾರಿಯಿಂದ ಬರುವ ಕೆಲಸಗಾರರ ಜೀವನ ಹೇಗಿರುತ್ತದೆ ಎಂದು ಇದರಲ್ಲಿ ತೋರಿಸಿಕೊಟ್ಟಿದ್ದಾರೆ. ಮನು ಕೆ. ಶಟ್ಟಿಹಳ್ಳಿ ಕಥೆ, ಚಿತ್ರಕಥೆ, ಸಂಭಾಷಣೆ ಸಾಹಿತ್ಯ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕರ್ಣ ಕುಮಾರ್, ಐಶ್ವರ್ಯಾ ರಾವ್, ರಘು ಪಾಂಡೇಶ್ವರ, ಶಫಿ, ಸತೀಶ್, ಮೊದಲಾದವರು ನಟಿಸಿರುವ ಚಿತ್ರವನ್ನು ಸುರೇಶ್ರರವರು ಸೃಷ್ಟಿ ಎಂಟರ್ಪ್ರೈ ಸಸ್ ಬ್ಯಾನರ್ ಅಡಿಯಲ್ಲಿ ತಯಾರಿಸಿದ್ದಾರೆ. ಆರಂಭದಿಂದಲೂ ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಸಹಾಯ ಮತ್ತು ಸಹಕಾರ ನೀಡಿದ್ದಾರೆ.
  Ready to come to the screen: Jark!
ತೆರೆಗೆ ಬರಲು ರೆಡಿಯಾಗಿದೆ `ಜರ್ಕ್’!
ದರ್ಶನ್ ಹುಟ್ಟುಹಬ್ಬದಂದೇ ಅವರ ಅಭಿಮಾನಿಗಳು ಸೇರಿ ತಯಾರಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ‘ಜರ್ಕ್’ ಚಿತ್ರದ ಆಡಿಯೋ ರಿಲೀಸ್ ಮಾಡಲಾಗಿದೆ. ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದಲ್ಲಿ ನಿರ್ದೇಶಕ ಮಹಾಂತೇಶ್ ಮದಕರಿ ‘ಜೀವನ ಅನ್ನೋ ಜರ್ನಿಯಲ್ಲಿ ಸಾಕಷ್ಟು ತಿರುವುಗಳು ಎದುರಾಗುತ್ತವೆ. ಅತಿ ವೇಗವಾಗಿ ಹೋಗುವ ಬದುಕು ಇದ್ದಕ್ಕಿದ್ದಂತೆ ನಿಂತಂತಾಗುತ್ತದೆ’ ಎಂಬ ವಿಷಯವನ್ನು ಭಿನ್ನವಾಗಿ ಹೇಳಲು ಪ್ರಯತ್ನಿಸಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆ ಮಾಡಿದ ಲಹರಿ ಸಂಸ್ಥೆ ಮಾಲೀಕರಾದ ವೇಲು ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಕೋಚಿಂಗ್ ಕ್ಲಾಸ್ಗೆಂಿದು ಬೆಂಗಳೂರಿಗೆ ಬರುವ ಹುಡುಗನಿಗೆ ಇಲ್ಲಿ ಎದುರಾಗಬಹುದಾದ ಅನುಭವಗಳನ್ನಿಟ್ಟುಕೊಂಡು ಚಿತ್ರದ ಕಥೆಯನ್ನು ವಿಭಿನ್ನವಾಗಿ ಹೆಣೆಯಲಾಗಿದೆ. ಕಮರ್ಷಿಯಲ್ ಅಂಶಗಳ ಜೊತೆಯಲ್ಲಿ ಸಾಕಷ್ಟು ಸಂದೇಶಗಳು ಈ ಚಿತ್ರದಲ್ಲಿದೆ. ಮಯೂರ ಪೆÇ್ರಡಕ್ಷನ್ಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗಿದ್ದು, ಕೃಷ್ಣರಾಜ್, ನಿತ್ಯಾರಾಜ್, ಆಶಾ ಭಂಡಾರಿ, ಗಡ್ಡಪ್ಪ, ಸಚಿನ್, ಪವನ್, ಕುರಿಬಾಂಡ್ ರಂಗ, ಬುಲೆಟ್ ಪ್ರಕಾಶ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
 Horror Panchamukhi Audio Release

ಹಾರರ್ ಪಂಚಮುಖಿಯ ಆಡಿಯೋ ರಿಲೀಸ್
ಹಾರರ್ ಥ್ರಿಲ್ಲರ್ ಹಾಗೂ ಕಾಮಿಡಿ ಮಿಶ್ರಣದ ಚಿತ್ರ `ಪಂಚಮುಖಿ’ಯ ಆಡಿಯೋ ಬಿಡುಗಡೆಯಾಗಿದೆ. ರಾಮ್ ಕಾಲ್ ಚಂದ್ರು ನಟಿಸಿ ನಿರ್ದೇಶಿಸಿರುವ `ಪಂಚಮುಖಿ ಚಿತ್ರದ ಧ್ವನಿಸುರುಳಿಯನ್ನು ಹಾಸ್ಯ ನಟ ಮಿತ್ರ ಅವರು ಬಿಡುಗಡೆ ಮಾಡಿದರು. ತ್ರಿಕೋನ ಪ್ರೇಮಕಥೆಯ ಈ ಚಿತ್ರದಲ್ಲಿ ಸ್ಫೂರ್ತಿ ಕಾರಾಡಿ ಹಾಗೂ ಗೌತಮಿ ಇಬ್ಬರು ನಾಯಕಿಯರು. ಇವರಿಬ್ಬರೂ ನಾಯಕಿಯರಾಗಿ `ಪಂಚಮುಖಿ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿದ್ದಾರೆ. ಪಂಚಮುಖಿ ಚಿತ್ರವನ್ನು ಎಸ್.ಪಿ. ಪೆÇ್ರಡಕ್ಷನ್ ಲಾಂಚನದಲ್ಲಿ ಅಭಿಷೇಕ್ ನಿರ್ಮಾಣ ಮಾಡಿದ್ದು, ಹಾಡುಗಳ ಚಿತ್ರೀಕರಣ ಬಾಕಿ ಇದೆ. ಮುಂದಿನ ದಿನಗಳಲ್ಲಿ ಹಾಡುಗಳ ಚಿತ್ರೀಕರಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ ಚಿತ್ರತಂಡ.


       
Infotainment
InfoMedia
We
contact us
© 2010 Chittara. All Rights Reserved