Visitors

 Star Talk

ಗಣಪತಿ ಏನೇ ಮಾಡಿದರೂ ಅದಕ್ಕೆ ನ್ಯಾಯ ಕಟ್ಟಿಟ್ಟ ಬುತ್ತಿ. `ಚಿತ್ತಾರ' ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದೇ ಇದಕ್ಕೆ ಸಾಕ್ಷಿ. ಕನ್ನಡ ಚಿತ್ರರಂಗ 75 ವಸಂತಗಳನ್ನು ಪೂರೈಸಿ ಶತಕದ ಅಂಚಿನಲ್ಲಿದೆ. ಸಿನಿಮಾ ಪತ್ರಿಕೆಯಾದ `ಚಿತ್ತಾರ'ವೂ ಶತಕದ ಸಂಭ್ರಮ ಆಚರಿಸಲಿ ಎಂಬುದು ನಮ್ಮೆಲ್ಲರ ಹಾರೈಕೆ. ಈಗ ಮತ್ತೊಂದು ಮೈಲುಗಲ್ಲಿನ ಮೂಲಕ ಓದುಗರ ನಿರೀಕ್ಷೆಯನ್ನು ಇಮ್ಮಡಿಗೊಳಿಸಲು ಸಜ್ಜಾಗಿದೆ. ಅಭಿನಂದನೆ.


ಪಾರ್ವತಮ್ಮ ರಾಜ್ಕುಮಾರ್

ಏನೇ ಹೇಳ್ರೀ `ಚಿತ್ತಾರ'ಕ್ಕೆ `ಚಿತ್ತಾರ'ವೇ ಸರಿಸಾಟಿ. ಇಡೀ ಗಾಂಧೀನಗರವನ್ನೇ ಜಾಲಾಡಿ ಹಳಬರು ಹೊಸಬರು ಎನ್ನದೇ ಎಲ್ಲರಿಗೂ ಸಮಾನ ವೇದಿಕೆಯನ್ನ `ಚಿತ್ತಾರ' ಕಲ್ಪಿಸುತ್ತದೆ. ಮರೆತ ಕಲಾವಿದರನ್ನು ಮತ್ತೆ ನೆನಪಿಗೆ ತರುತ್ತದೆ.


ಅಂಬರೀಶ್

`ಚಿತ್ತಾರ' ತುಂಬಾ ಚೆನ್ನಾಗಿ ಬರ್ತಾಯಿದೆ. ಇಂಗ್ಲಿಷ್ ಮ್ಯಾಗ್ಜಿನ್ಗೆ ಪೈಪೋಟಿ ನೀಡೋಥರ ಇದೆ. ಕಂಪ್ಲೀಟ್ ಸಿನಿಮಾ ನ್ಯೂಸ್ನ ನಾವು `ಚಿತ್ತಾರ'ದಲ್ಲಿ ಕಾಣಬಹುದಾಗಿದೆ. ಆಲ್ ದಿ ಬೆಸ್ಟ್.


ರಾಜೇಂದ್ರ ಸಿಂಗ್ ಬಾಬು

`ಚಿತ್ತಾರ'ಕ್ಕೆ ವರ್ಷ ಕಳೆದಿದ್ದು ಗೊತ್ತೇ ಆಗಲಿಲ್ಲ! ಹ್ಯಾಟ್ಸ್ ಆಫ್ `ಚಿತ್ತಾರ'. ಇದರ ಪ್ರತಿಯೊಂದು ಅಂಕಣವೂ ಓದುಗರನ್ನು ಸೆಳೆಯುತ್ತದೆ. ಸತ್ಯಾಸತ್ಯತೆಯ ವಿವರಗಳನ್ನು ನಾವು `ಚಿತ್ತಾರ'ದಲ್ಲಿ ಮಾತ್ರ ಕಾಣೋಕೆ ಸಾಧ್ಯ.


ಟಿ. ಎಸ್. ನಾಗಾಭರಣ

ಈಗಿನ ಕನ್ನಡ ಚಿತ್ರರಂಗದ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಅದರ ಒಳ-ಹೊರಗನ್ನು `ಚಿತ್ತಾರ' ಸಮಗ್ರವಾಗಿ ಕಟ್ಟಿಕೊಡುತ್ತದೆ. ಒಳ್ಳೆಯ ಸಿನಿಮಾ ಪತ್ರಿಕೆಯ ನಿರೀಕ್ಷೆಯಲ್ಲಿದ್ದವರಿಗೆ `ಚಿತ್ತಾರ' ಅದ್ಭುತ ಕೊಡುಗೆ. ಒಂದು ವರ್ಷವನ್ನು ಯಶಸ್ವಿಯಾಗಿ ಆಚರಿಸಿದ `ಚಿತ್ತಾರ' ಈ ಜನ್ಮದಲ್ಲಷ್ಟೇ ಅಲ್ಲ, ನೂರು ಜನ್ಮಕೂ ಅದುಓದುಗರ ನಂ. 1 ಪತ್ರಿಕೆಯಾಗಲಿ.


ನಾಗತಿಹಳ್ಳಿ ಚಂದ್ರಶೇಖರ್

ಕನ್ನಡ ಸಿನಿಮಾ ಪತ್ರಿಕೆಗಳಲ್ಲಿ ಬಹುದಿನದಿಂದಲೂ ಒಂದು ಕೊರತೆ ಎದ್ದುಕಾಣುತ್ತಿತ್ತು. ಅದನ್ನ `ಚಿತ್ತಾರ' ನೀಗಿಸಿದೆ. ಈಗಿನ ಚಿತ್ರೋದ್ಯಮದ ಪರಿಸ್ಥಿತಿ ಹದಗೆಟ್ಟಿದೆ. ಸಿನಿಮಾ ತಾರೆಯರ ಖಾಸಗಿ ಬದುಕಿಗೂ ಕೆಲವು ಕಿಡಿಗೇಡಿಗಳು ಕೆಸರೆರಚುತ್ತಾರೆ. ಇಂತಹ ಸುಳ್ಳು ಆರೋಪಗಳ ಸಮಗ್ರ ತನಿಖೆಯ ಮೂಲಕ ಕಲಾವಿದರಿಗೆ ಬೆಂಬಲವಾಗಿ `ಚಿತ್ತಾರ' ನಿಂತಿದೆ.


ಉಮಾಶ್ರೀ

ಹುಡುಗಿಯರ ಮನಸೆಳೆಯೋಕೆ ಹುಡುಗರು ಗುಲಾಬಿ `ಹೂ' ಕೊಡ್ತಾರೆ. ಓದುಗರನ್ನ ಸೆಳೆಯೋಕೆ ನಮ್ಮ ಗಣಪತಿಯವರು `ಚಿತ್ತಾರ' ಕೊಡ್ತಾರೆ. ಇದೆ ಅಲ್ವೆ ಮ್ಯಾಜಿಕ್! ದಟ್ ಈಸ್ `ಚಿತ್ತಾರ'. ಒನ್ ಅಂಡ್ ಓನ್ಲಿ ನಂ. 1 ಮ್ಯಾಗಜಿನ್.


ವಿ. ರವಿಚಂದ್ರನ್

'ಚಿತ್ತಾರ' ಸಿಂಪ್ಲಿ ಸೂಪಬರ್್. ಲೇಖನಗಳು, ಕವರ್ಪೇಜ್ ಎಲ್ಲವೂ ಫಂಟಾಸ್ಟಿಕ್. ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಟ್ಟಿರುವ `ಚಿತ್ತಾರ'ಕ್ಕೆ ಕಂಗ್ರ್ಯಾಜುಲೇಷನ್. ಗುಡ್ ಲಕ್.


ಶಿವರಾಜ್ಕುಮಾರ್

ಚಿತ್ರರಂಗ ಈಗ ಸ್ವಲ್ಪ ಕುಲಗೆಟ್ಟಿದೆ ಅಂತ ಹೇಳಬಹುದು. ಇಂಥ ಸಂದರ್ಭದಲ್ಲಿ ಪತ್ರಿಕೆಗಳ ಪಾತ್ರ ತುಂಬಾ ಮಹತ್ತರವಾದುದು. ಅದನ್ನ `ಚಿತ್ತಾರ' ಚೆನ್ನಾಗಿ ನಿಭಾಯಿಸಿಕೊಂಡು ಹೋಗ್ತಾಯಿದೆ. ಇಂಥ ಒಂದು ಪತ್ರಿಕೆ ಕನ್ನಡಕ್ಕೆ ಅವಶ್ಯವಿತ್ತು. ಅದು ಈಗ ಸಾಕಾರಗೊಂಡಿದೆ.


ಎಸ್. ನಾರಾಯಣ್.

ಮೇಷ್ಟ್ರೇ ಅದ್ಭುತ ಪ್ರತಿಕ್ರಿಯೆ. ರಾಜ್ಯಾದ್ಯಂತ ದಾಖಲೆಯ ಕಲೆಕ್ಷನ್. ನನಗಂತೂ ಜನ ದಂಡೆತ್ತಿ ಬಂದು ನೋಡಿ, ಖುಷಿ ಪಟ್ಟು ಮತ್ತೆ ಮತ್ತೆ ಥೇಟರಿಗೆ ಬರ್ತಿರೋದನ್ನ ಕಂಡ್ರೆ ಮೇಷ್ಟ್ರೆ ಹೆದರಿಕೆ ಆಗ್ತಿದೆ. ಇನ್ನೊಂದೆಡೆ, ಅಬ್ಬಾ ಕೊನೆಗೂ ಜನ ಥೇಟರಿನತ್ತಮುಖ ಹಾಕಿದ್ರಲ್ಲಾ... ಅನ್ನೋ ಧನ್ಯತೆ. ಮೇಷ್ಟ್ರೇ 'ಪಂಚರಂಗಿ' ಏನೋ ಮಾಡುತ್ತೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾಣೆ. ಹಾಗೆ ಮುಗೀಬೀಳುತ್ತಿದ್ದಾರೆ ಪ್ರೀತಿ, ಉತ್ಸಾಹದಿಂದ. ಜನರು ಹುಚ್ಚರಾಗಿದ್ದಾರೆ. ಮೇಷ್ಟ್ರೇ, ನನಗೇ ನಂಬೋಕೆ ಆಗ್ತಾ ಇಲ್ಲ...! ನಿಮ್ಮೆಲ್ಲರ ಸಹಕಾರ, ಒತ್ತಾಸೆಯನ್ನ ಯಾವತ್ತೂ ಮರೆಯಲಾರೆ...

ಯೋಗರಾಜ್ ಭಟ್

ಕನ್ನಡ ಚಿತ್ರರಂಗಕ್ಕೆ ಇಂಥ ಒಂದು ಸಿನಿಮಾ ಪತ್ರಿಕೆಯ ಅವಶ್ಯಕತೆ ಇತ್ತು. ಅದು `ಚಿತ್ತಾರ'ದ ಮೂಲಕ ಸಾಕಾರಗೊಂಡಿದೆ. `ಚಿತ್ತಾರ' ಓದುಗರ ಚಿತ್ತವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿ
ಮುನ್ನಡೆಯುತ್ತಿದೆ. ಇದು ಹೀಗೆಯೇ ನಿತ್ಯನಿರಂತರವಾಗಿರಲಿ ಎಂಬುದು ನನ್ನ ಆಸೆ.

ರಾಕ್ಲೈನ್ ವೆಂಕಟೇಶ್

`ಚಿತ್ತಾರ' ಬಹಳ ಚೆನ್ನಾಗಿ ಬರ್ತಾಯಿದೆ. ಬಿ. ಗಣಪತಿಯವರು ಪ್ರಾರಂಭಿಸುತ್ತಾರೆ ಅಂದಾಗಲೇ ನಮಗೆ ಒಂದು ಕಾನ್ಫಿಡೆನ್ಸ್ ಇತ್ತು-ಇದು ಸ್ಟ್ಯಾಂಡಡರ್್ ಆಗಿಯೇ ಬರುತ್ತೆ ಅಂತ. ಇಂಡಸ್ಟ್ರಿಗೆ ಎನ್ಕರೇಜ್ ಮಾಡೋಥರ, ಪಾಸಿಟಿವ್ ಆಗಿ ಆಟರ್ಿಕಲ್ಸ್ ಬರುತ್ತೆ. ಲೇಔಟ್ ತುಂಬಾ ಚೆನ್ನಾಗಿರುತ್ತೆ. ಓದುಗರ ಮತ್ತು ಇಂಡಸ್ಟ್ರಿಯವರ ಮಧ್ಯೆ ಒಂದು ಬ್ರಿಡ್ಜ್ ಥರ `ಚಿತ್ತಾರ' ಬರ್ತಾಯಿದೆ.

ರಮೇಶ್ ಅರವಿಂದ್

ಕನ್ನಡದಲ್ಲಿ ನಂ. 1 ಮ್ಯಾಗ್ಜಿನ್ ಅಂದ್ರೆ `ಚಿತ್ತಾರ'. ಒನ್ ಇಯರ್ ಬತರ್್ಡೇ ಆಚರಿಸಿ ಕೊಳ್ತಾಯಿರೋ `ಚಿತ್ತಾರ'ಕ್ಕೆ ಹಾಗೂ ಹೊಸ ಪತ್ರಿಕೆಗೂ ಆಲ್ ದಿ ಬೆಸ್ಟ್.


ಉಪೇಂದ್ರ

`ಚಿತ್ತಾರ'ಕ್ಕೆ ವರ್ಷ ತುಂಬಿದ್ದು ನಮಗೆಲ್ಲ ಹರ್ಷ ತಂದಿದೆ. `ಚಿತ್ತಾರ'ದ ಸಮೃದ್ಧ ಬರವಣಿಗೆ ಓದುಗರಿಗೆ ಎಂದೂ ನಿರಾಸೆ ತಂದಿಲ್ಲ. ಇದು ಹೀಗೆ ಮುಂದುವರೆಯಲಿ.


ಪುನೀತ್ ರಾಜ್ಕುಮಾರ್


`ಚಿತ್ತಾರ' ತುಂಬಾ ಚೆನ್ನಾಗಿ ಬರ್ತಾಯಿದೆ. ಪ್ರಿಂಟ್ ಕ್ವಾಲಿಟಿ ಚೆನ್ನಾಗಿದೆ. ಅನ್ನೆಸಸರಿ ಗಾಸಿಪ್ ಇಲ್ಲದೆ ಕನ್ಸ್ಟ್ರಕ್ಟಿವ್ ಅಂಡ್ ಕ್ರಿಯೇಟಿವ್ ಆಗಿ ಬರ್ತಾಯಿದೆ.


ಅವಿನಾಶ್

ಗಣಪತಿಯವರ `ಚಿತ್ತಾರ' ಅದ್ಭುತವಾಗಿ ಮೂಡಿ ಬರ್ತಾಯಿದೆ. ಅದರಲ್ಲಿಯ ಲೇಖನಗಳು ತುಂಬ ನೈಜತೆಯಿಂದ ಕೂಡಿರುತ್ತವೆ. ಓದುತ್ತಾ ಓದುತ್ತಾ ಅದರೊಳಗೆ ಮಗ್ನವಾಗಿಬಿಡುತ್ತೇವೆ. ಹೀಗೆ ಕನ್ನಡದ ನಂ. 1 ಪತ್ರಿಕೆಯಾಗಲಿ.


ತಾರಾ

ನನ್ನ ಮುಖಪುಟವನ್ನು ಹೊತ್ತು ಆರಂಭವಾದ `ಚಿತ್ತಾರ'ಕ್ಕೆ ಈಗ ವರ್ಷದ ಸಂಭ್ರಮ. ನನಗಂತೂ ತುಂಬಾ ಖುಷಿಯಾಗ್ತಾಯಿದೆ. ನನ್ನಂತೆಯೇ ಸಾಕಷ್ಟು ನಟಿಯರು `ಚಿತ್ತಾರ'ದ ಮುಖಪುಟದಲ್ಲಿ ವಿಜೃಂಭಿಸಲಿ. `ಚಿತ್ತಾರ'ಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು.


ರಮ್ಯ

ಸಿನಿಮಾ ಕುರಿತ ಕ್ರೇಜ್ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಸಿನಿಮಾಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅತಿ ಶೀಘ್ರವಾಗಿ ಮಾರುಕಟ್ಟೆಗೆ ಹೊತ್ತು ತರುತ್ತಿರುವುದು 'ಚಿತ್ತಾರ'ದ ಹೆಗ್ಗಳಿಕೆ. ಆಲ್ ದಿ ಬೆಸ್ಟ್.


ರಾಘವೇಂದ್ರ ರಾಜ್ಕುಮಾರ್

ಅದ್ಭುತ, ಸಮಗ್ರ, ಅಚ್ಚುಕಟ್ಟು ಮತ್ತು ರಸವತ್ತಾಗಿ `ಚಿತ್ತಾರ' ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ತುಂಬ ಗ್ಲ್ಯಾಮರಸ್ ಆಗಿ ಬರುತ್ತೆ. ಸುಮ್ಮನೆ ಓದಿ ಎತ್ತಿಡೋದಕ್ಕೆ ಆಗಲ್ಲ. ಚಿತ್ರರಂಗಕ್ಕೆ ಒಂದು ಕನ್ನಡಿಯಾಗಿದೆ.


ಕೆ. ಕಲ್ಯಾಣ್

ಫೆಂಟಾಸ್ಟಿಕ್. ಇಂಗ್ಲಿಷ್ ಮ್ಯಾಗ್ಜಿನ್ಗಳ ಥರ ಕನ್ನಡದಲ್ಲೊಂದು ಪತ್ರಿಕೆ ಬರ್ತಾಯಿಲ್ವಲ್ಲ ಅನ್ನುವ ಕೊರಗು ತುಂಬಾ ದಿನದಿಂದ ಇತ್ತು. ಆ ಕೊರತೆಯನ್ನ `ಚಿತ್ತಾರ' ತುಂಬಿದೆ. ಟಠಿಟಥಿ ಣಠಿಜಡಿ . ಆಟರ್ಿಕಲ್ಸ್ ಸಹ ಅಷ್ಟೇ ಚೆನ್ನಾಗಿ ಬರ್ತಾಯಿವೆ. ಸಿನಿಮಾದ ಸಮಗ್ರ ವರದಿಯನ್ನು ನೀಡುವುದರಲ್ಲಿ 'ಚಿತ್ತಾರ' ಮೊದಲನೆಯದು.


ಶಶಾಂಕ್

ನೊಣಗಳು ಎಲ್ಲಾ ಕಡೆ ಕೂರುತ್ತೆ, ಆದರೆ ಜೇನುನೊಣಗಳು ಕೆಲವು ಕಡೆ ಮಾತ್ರ ಕೂರುತ್ತೆ. ಹಾಗೆ ಸಿನಿಮಾ ಪತ್ರಿಕೆಗಳು ಸಾಕಷ್ಟು ಬರುತ್ತೆ, ಹೋಗುತ್ತೆ. ಆದರೆ ಜನರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಗುತ್ತವೆ. `ಚಿತ್ತಾರ' ಇದಕ್ಕೆ ಸವಾಲಾಗಿ ಎಲ್ಲ ವರ್ಗದ ಓದುಗರನ್ನೂ ಹೊಂದಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದು ವರ್ಷಕ್ಕೆ ಮಾತ್ರ ಸೀಮಿತವಾಗದೆ ಮುಂದಿನ ತಲೆಮಾರಿನವರೆಗೂ ಸಾಗುತಿರಲಿ.

ಗುರುಪ್ರಸಾದ್

`ಚಿತ್ತಾರ'ದ ವರ್ಷದ ಆಚರಣೆಗೆ ಅಭಿನಂದನೆಗಳು. ಲೇಖನಗಳು, ಲೇಔಟ್, ಪಿಕ್ಚರ್ಸ್ ಎಲ್ಲವೂ ಮನಸೂರೆಗೊಳ್ಳುತ್ತವೆ. ಒಳ್ಳೆ ಇಂಗ್ಲಿಷ್
ಮ್ಯಾಗ್ಜಿನ್ ಥರ ಇದೆ.


ನಿದರ್ೇಶಕ ಪ್ರೇಮ್

`ಚಿತ್ತಾರ' ಒಂದು ಮಿರರ್ ಇದ್ದ ಹಾಗೆ. ಅಲ್ಲಿ ಯಾವುದೇ ಮುಚ್ಚುಮರೆಯಿಲ್ಲದೆ ಚಿತ್ರರಂಗದಲ್ಲಿನ ಸಂಪೂರ್ಣ ವಿವರಣೆಯನ್ನು ನೇರವಾಗಿ ನಾವು ಪಡೆಯಬಹುದು. ಹೀಗೆ `ಚಿತ್ತಾರ' ಚಿತ್ರೋದ್ಯಮಕ್ಕೆ ಯಶಸ್ಸಿನ ಕೈಗನ್ನಡಿಯಾಗಲಿ.


ಸೂರಿ

ಫೆಂಟಾಸ್ಟಿಕ್. ಕ್ವಾಲಿಟಿ-ಕ್ವಾಂಟಿಟಿ ಸೂಪಬರ್್! ಗುಡ್ ಲಕ್ 'ಚಿತ್ತಾರ' ಟೀಮ್.


ಸೋನು ನಿಗಮ್

ಹೊಸ ಪ್ರತಿಭೆಗಳನ್ನು 'ಚಿತ್ತಾರ' ಪರಿಚಯಿಸುತ್ತಾ ಬಂದಿದ್ದು, ಅವರ ಕಲೆಯನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುತ್ತಾ
ಬರುತ್ತಿದೆ. ಹೀಗೆಯೇ ಚಿರನೂತನವಾಗಿರಲಿ 'ಚಿತ್ತಾರ'.

ಅನಿರುದ್ಧ

`ಚಿತ್ತಾರ' ತುಂಬಾ ಇನ್ಫರ್ಮೇಷನ್ ಹೊತ್ತುಕೊಂಡು ಮಾರುಕಟ್ಟೆಗೆ ಬರುತ್ತೆ. ಫೇಸ್ ಟು ಫೇಸ್ ಇಂಟರ್ವ್ಯೂ ಆಗಿರಬಹುದು, ಲೇಔಟ್
ಆಗಿರಬಹುದು, ಪ್ರತಿಯೊಂದು ತುಂಬಾ ಚೆನ್ನಾಗಿ ಬರುತ್ತೆ. 7.

ಆದಿತ್ಯ

'ಚಿತ್ತಾರ' ಒಳ್ಳೆ ಮ್ಯಾಗ್ಜಿನ್. ಕನ್ನಡ ಇಂಡಸ್ಟ್ರಿಯಲ್ಲಿ ಏನ್ ನಡೀತಿದೆ ಎಲ್ಲವನ್ನೂ ತಿಳಿಸಿ ಕೊಡುತ್ತೆ. ತುಂಬಾನೆ ಪಾಪ್ಯುಲರ್ ಆಗಿದೆ. ನಾನು ಎಲ್ಲಾದರೂ ಹೋದಾಗ ಜನರನ್ನ ಕೇಳಿದಾಗ ಅವರು `ಚಿತ್ತಾರ' ನಮ್ಮ ಫೇವರಿಟ್ ಮ್ಯಾಗ್ಜಿನ್ ಅಂತ ಹೇಳ್ತಾರೆ.


ಶಮರ್ಿಳಾ ಮಾಂಡ್ರೆ


`ಚಿತ್ತಾರ' ಒನ್ ಇಯರ್ ಬತರ್್ಡೇ ಆಚರಿಸಿಕೊಳ್ಳುತ್ತಿರುವುದಕ್ಕೆ ಫಸ್ಟ್ಫಾಲ್ ವಿಶಸ್ ತಿಳಿಸುತ್ತೇನೆ. ಇದು ಕನ್ನಡ ಓದುಗರ ಚೆಲುವಿನ `ಚಿತ್ತಾರ' ಆಗಲಿ. ಈಗ 3ಡಿ ಮೂವೀಸ್ ಎಲ್ಲ ಬರ್ತಾಯಿವೆ. ಸೋ... `ಚಿತ್ತಾರ'ನೂ ತ್ರಿ ಡೈಮೆನ್ಶನ್ನಲ್ಲಿ ಬರಲಿ.


ಕೋಮಲ್

`ಚಿತ್ತಾರ' ಈಸ್ ದ ಬೆಸ್ಟ್ ಮ್ಯಾಗ್ಜಿನ್. ಫ್ರಂಟ್ ಕವರ್ ಪೇಜ್ನಲ್ಲಿ ಮೇಲ್ ಅಥವಾ ಫೀಮೇಲ್ ಯಾರದೇ ಫೋಟೋ ಹಾಕಿದ್ರು ತುಂಬಾ ಗ್ಲ್ಯಾಮರಸ್ ಆಗಿರುತ್ತೆ. ಪಿಕ್ಚರ್ಸ್ ಮತ್ತೆ ರೈಟ್ ಅಪ್ ತುಂಬಾ ಚೆನ್ನಾಗಿ ಬರ್ತಾಯಿದೆ. ರಿಯಾಲಿಸ್ಟಿಕ್ ಮ್ಯಾಗ್ಜಿನ್ ಇದು.


ನೀತೂ

`ಚಿತ್ತಾರ' ಕವರ್ ಪೇಜ್ ನಮ್ಮನ್ನು ತುಂಬ ಬೇಗ ಅಟ್ರ್ಯಾಕ್ಟ್ ಮಾಡುತ್ತೆ. ಅದರಲ್ಲಿ ಇಂಗ್ಲಿಷ್ ಬಳಸುವ ಸ್ಟೈಲ್ ಸೂಪರ್. ಆಟರ್ಿಕಲ್ಸ್ ಸಹ ತುಂಬ ಚೆನ್ನಾಗಿ ಬರ್ತಾಯಿವೆ.


ತೇಜಸ್ವಿನಿ

ಎಲ್ಲಾ ಮನಸ್ಸುಗಳನ್ನು ತನ್ನಷ್ಟಕ್ಕೆ ತಾನೇ ಸಹಜವಾಗಿ ಸೆಳೆಯುವ ಒಂದು ಸುಂದರ ಆವರಣವೇ 'ಚಿತ್ತಾರ'.


ಶ್ರೀಧರ್

ಪ್ರೊಡಕ್ಷನ್ ತುಂಬಾ ಚೆನ್ನಾಗಿದೆ. ಬರವಣಿಗೆ, ಸೆಲೆಕ್ಟ್ ಮಾಡಿಕೊಳ್ಳುವ ಟಾಪಿಕ್ಸ್ ತುಂಬಾ ಸಮಯೋಚಿತ. ಆಕ್ಚುವಲಿ ವಿಷಯಗಳ ಕಡೆ
ತುಂಬಾ ಗಮನ ಹರಿಸುವುದರಿಂದ ಕನ್ನಡ ಚಿತ್ರರಂಗಕ್ಕೆ ಇದೊಂದು ಕಾಂಟ್ರಿಬ್ಯೂಷನ್ ಅಂತ ಹೇಳಬಹುದು.


ರಘು ದೀಕ್ಷಿತ್

ಕನ್ನಡದಲ್ಲಿ ಒಂದು ಪ್ರಬುದ್ಧ ಮಟ್ಟದಲ್ಲಿ ಸಿನಿಮಾ ಪತ್ರಿಕೆಯನ್ನು ಆರಂಭಿಸಿ ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ `ಚಿತ್ತಾರ' ಬಳಗಕ್ಕೆ ಅಭಿನಂದನೆ.

ಬಿ. ಜಯಶ್ರೀ

ಇಂಗ್ಲಿಷ್ ಮ್ಯಾಗ್ಜéೀನ್ ಕ್ವಾಲಿಟಿ. ನ್ಯೂಸ್ ಪೇಪರ್ ಕವರೇಜ್, ಲೇಔಟ್ ಎಲ್ಲವೂ ಚೆನ್ನಾಗಿ ಬರ್ತಾಯಿದೆ. ಇಂಗ್ಲಿಷ್ ವಡ್ಸರ್್ ಯೂಸ್ ಮಾಡ್ತೀರಲ್ಲ ಅದು ನೋಡೋಕೆ ತುಂಬ ಚೆನ್ನಾಗಿರುತ್ತೆ. ನಮ್ಮಲ್ಲಿರುವ ಟೆಕ್ನಿಷಿಯನ್ಸ್ ಬಗ್ಗೆ ವಿಶೇಷವಾಗಿ ಆಟರ್ಿಕಲ್ಸ್ ಬರಲಿ. ಕಲಾವಿದರ ಪ್ರತಿಭೆ ರೊಟೇಷನ್ ಆಗ್ತಿರಬೇಕು.


ಮುರುಳಿ

ಸಾಮಾನ್ಯವಾಗಿ ನಾನು ಬುಕ್ಸ್ ಓದಲು ಲೇಝಿ. ಅಂತಹದ್ದು 'ಚಿತ್ತಾರ' ಬಂದಾಗ ತಪ್ಪದೆ ಓದುವೆ. ಇಂಡಸ್ಟ್ರಿ ಬಗ್ಗೆ ಪೂತರ್ಿ ತಿಳಿದುಕೊಳ್ಳಬಹುದು. ಇಂಡಸ್ಟ್ರಿನಲ್ಲಿ ಏನೇನೂ ನಡಿತ್ತಿರತ್ತೇ.... ಪ್ಲಸ್ ಇರಬಹುದು, ಮೈನಸ್ ಇರಬಹುದು. ಅದರ ಜೊತೆಗೆ ಇರುವ ನಿಜಾಂಶ ಏನೆಂದು ತಿಳಿಸುತ್ತೆ 'ಚಿತ್ತಾರ'. ಎಷ್ಟೋ ಜನಕ್ಕೆ ಮೋಸ ಆಗಿರುತ್ತೆ. ಅದನ್ನು 'ಚಿತ್ತಾರ' ಇಲ್ಲಿ ಪ್ರೂವ್ ಮಾಡುತ್ತೆ. ಯಾವುದು ನಿಜ, ಯಾವುದು ಸುಳ್ಳು ಅಂತ. ಇದೇ ತರಹ ನನ್ನ ವಿಚಾರದಲ್ಲೂ ಕೂಡ 'ಚಿತ್ತಾರ' ಮಾಡಿದೆ. ನಿಜವಾಗಿಯೂ 'ಚಿತ್ತಾರ'ಕ್ಕೆ ಎಷ್ಟು ಥ್ಯಾಕ್ಸ್ ಹೇಳಿದರೂ ಕಡಿಮೆಯೇ. ನಾನು ಚೆನ್ನೈನಲ್ಲಿರಲಿ, ಹೈದ್ರಾಬಾದ್ನಲ್ಲಿರಲಿ 'ಚಿತ್ತಾರ' ಮನೆಗೆ ಬಂದು ಬಿಡಬೇಕು. ನನಗಿದು
ಕಂಪ್ಲಸರಿ.

ಹರಿಪ್ರಿಯಾ

       
Infotainment
InfoMedia
We
contact us
© 2010 Chittara. All Rights Reserved
Infotainment
InfoMedia
We
contact us
© 2010 Chittara. All Rights Reserved